Thursday, July 30, 2020

Assignment 10.About covid 19.Roopa V Patil.

ಸರಕಾರಿ ಪದವಿಪೂರ್ವ ಬಾಲಕರ ಕಾಲೇಜು (ಪ್ರೌಢ ಶಾಲಾ ವಿಭಾಗ), ಶಹಾಪೂರ
ವಿಷಯ:-ಕೋವಿಡ್-19

ಕೋವಿಡ್-19 ಪೊಸೆಟಿವ್ ಪ್ರಕರಣ ಹೆಚ್ಚುತ್ತಿರುವುದರಿಂದ ಆರೋಗ್ಯ ಸುರಕ್ಷತೆಗೆ ನಾವು ಮಾಡಲೆಬೇಕಾದ ಕ್ರಮ:
1. ಬೆಳಿಗ್ಗೆ ಎದ್ದತಕ್ಷಣ ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿ, ಬಾಯಿ ಮುಕ್ಕಳಿಸಿ, ಗಂಟಲಿನವರೆಗೆ ತೆಗೆದುಕೊಂಡು ಬಂದು ಗಾರ್ಗಲ್ ಮಾಡುವುದು.
2. ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ, ಕನಿಷ್ಠ 2ಮೀ ಅಂತರವಿರುವುದು.
3. ಕಾಳು ಮೆಣಸು, ಶುಂಠಿ, ಜೀರಿಗೆ, ದಾಲ್ಚಿನಿ, ಲವಂಗ, ತುಳಸಿ, ಅಮೃತ ಬಳ್ಳಿಯ ಬೇರು, ಕಾಂಡವನ್ನು ಬಳಸಿಕೊಂಡು ಕಷಾಯ ಮಾಡಿ ದಿನಾಲು 2 ಬಾರಿ ಸೇವಿಸುವುದು.
4. ಅರಿಷಿಣ ಪುಡಿಯನ್ನು ಹಾಲಿನೊಂದಿಗೆ ಸೇರಿಸಿ ರಾತ್ರಿ ಮಲಗುವ ಮುಂಚೆ ಕುಡಿಯುವುದು.
5. ಸ್ವದೇಶಿ ಹಾಗೂ ಆಯುರ್ವೆದ ವಸ್ತುಗಳ ಬಳಕೆ ನಮ್ಮೆಲ್ಲರ ಜೀವನ ಪದ್ಧತಿಯಾದಲ್ಲಿ ಕರೋನಾದಂತಹ ಮಹಾಮಾರಿ ಹೆಸರಿಲ್ಲದಂತೆ ಓಡಿಸಬಹುದು.
6. ಕೈಗಳನ್ನು ಆಗಾಗ್ಗೆ ಸಾಬೂನಿನಿಂದ ಕೈತೊಳೆಯಬೇಕು.
7. ಮನೆಯಿಂದ ಹೊರಗಡೆ ಇದ್ದಲ್ಲಿ ಸ್ಯಾನಿಟೈಜರ್ ಬಳಸುವುದು.
8. ಡಿ.ಡಿ. ವಾಹಿನಿಯಲ್ಲಿ ಪ್ರಸಾರವಾಗುವ ಪಾಠಗಳನ್ನು ವಿಕ್ಷಿಸಿ ಅಭ್ಯಾಸದಲ್ಲಿ ತೊಡಗುವುದು.
9. ಹಸಿರು ತರಕಾರಿಗಳನ್ನು ಉಪ್ಪು ಮಿಶ್ರಿತ ನೀರಿನಲ್ಲಿ ಚೆನ್ನಾಗಿ ತೊಳೆದು ಉಪಯೋಗಿಸುವುದು.
10. ದಿನಕ್ಕೆ ನಾಲ್ಕು ಬಾರಿಯಾದರೂ ಬಿಸಿ ನೀರನ್ನು ಸೇವಿಸುವುದು.
11. ಪೌಷ್ಟಿಕ ಆಹಾರವನ್ನು ಸೇವಿಸುವುದು.
12. ನಿಯಮಿತ ಪ್ರಾಣಾಯಾಮಗಳನ್ನು ಮಾಡುವುದು.
13. ಅತ್ಯವಶ್ಯವಿದ್ದಾಗ ಮಾತ್ರ ಮನೆಯಿಂದ ಹೊರಗಡೆ ಹೋಗುವುದು.
14. ಜ್ವರ , ಕೆಮ್ಮು, ನೆಗಡಿ ಬಂದವರಿಂದ ಅಂತರ ಕಾಯ್ದುಕೊಳ್ಳುವುದು.
15. ಉಸಿರಾಟದ ತೊಂದರೆಯುಂಟಾದ ನಿರ್ಲಕ್ಷಿಸಿದೇ ವೈದ್ಯರನ್ನು ಭೇಟಿಯಾಗುವುದು.
ಶಿಕ್ಷಕರ ಸಹಿ ಮುಖ್ಯ ಗುರುಗಳ ಸಹಿ

No comments:

Post a Comment