ಸರಕಾರಿ ಪದವಿಪೂರ್ವ ಬಾಲಕರ ಕಾಲೇಜು (ಪ್ರೌಢ ಶಾಲಾ ವಿಭಾಗ), ಶಹಾಪೂರ
ವಿಷಯ:-ವೃತ್ತಿ ನೈಪುಣ್ಯತೆ
ಸದರಿ ಮನೆಯಿಂದಲೇ ಕೆಲಸದಡಿಯಲ್ಲಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವ ಕುರಿತಂತೆ 400 ಪದಗಳ ಲೇಖನ:
ಮನೆಯು ಕೂಡ ಒಂದು ಪಾಠ ಶಾಲೆ ಇದ್ದಂತೆ. ಮನೆಯಲ್ಲಿನ ಕೆಲಸಗಳಂತೆಯೇ ಪಾಠಗಳು ಸಾಗಬೇಕು. ತಾಯಿಗೆ ಪರ್ಯಾಯ ಶಿಕ್ಷಕರು. ಮನೆಗೂ ಪಾಠಶಾಲೆಗೂ ವ್ಯತ್ಯಾಸವಿರಬಾರದು. ಪಾಠಕ್ರಮ ಮಕ್ಕಳ ಅಭಿರುಚಿಗೆ ಅನುಗುಣವಾಗಿ ಸಿದ್ಧಪಡಿಸಬೇಕು. ಮಕ್ಕಳು ಸಹಜ ಸಿದ್ಧವಾಗಿ ರೂಪಿಸಿಕೊಳ್ಳುವ ಆಟಗಳು ಅವರ ಓದಿಗೆ ಮಾರ್ಗದರ್ಶಕವಾಗಿರಬೇಕು. ದೈಹಿಕ ಬೆಳವಣಿಗೆಗೆ ಸಲಹೆಗಳನ್ನು ಕೊಡಬೇಕು. ಕಲಿಕೆಗೆ ಪೂರಕವಾಗುವ ಚಟುವಟಿಕೆಗಳನ್ನು ಸ್ವಯಂ ತಯಾರಿಸುವಿಕೆಯಿಂದ ಹೆಚ್ಚಿನ ಪ್ರೋತ್ಸಾಹ ದೊರೆಯುವುದು.
ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆಗಳು ಹೊಸದೇನಲ್ಲ. ಕಲಿಕೆಯಲ್ಲಿ ತೀವೃಗತಿಯ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಸರಕಾರ ಹಲವಾರು ಪ್ರಯತ್ನ ಪಡುತ್ತಲೇ ಇರುತ್ತದೆ. ಕರ್ನಾಟಕ ಸರ್ಕಾರ ಅನೇಕ ರೀತಿಯ ಶೈಕ್ಷಣಿಕ ಚಟುವಟಿಕೆಗಳನ್ನು ಜಾರಿಗೆ ತರಲು ಯೋಜನೆ ಹಾಕಿಕೊಂಡಿದೆ. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ಮನೆಯಿಂದಲೇ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಟ್ಟಿದೆ.
ಶಿಕ್ಷಕರಿಗೆ ತಂತ್ರಜ್ಞಾನ ಆಧಾರಿತ ಕಲಿಕಾ ವಾತಾವರಣಕ್ಕೆ ಹೊಂದಾಣಿಕೆ ಮಾಡಿಕೊಡುವಲ್ಲಿ ಹರಸಾಹಸ ಪಡುವಂತಾಗಿದೆ. ಇಂದು ಕೋವಿಡ್-19 ಪ್ರಪಂಚವನ್ನೆ ಭಾದಿಸುತ್ತಿರುವ ಸಂಧರ್ಭದಲ್ಲಿ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳು ಮುನ್ನಡೆಸುವುದು ಸವಾಲಾಗಿ ಪರಿಣಮಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಕರು ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಲು ಅನೇಕ ಚಟುವಟಿಕೆಗಳಲ್ಲಿ ತೊಡಗಿ ಹೊಸ ಹೊಸ ವಿಧಾನಗಳನ್ನು ಅನುಸರಿಸಬೇಕಾದ ಅನಿವಾರ್ಯತೆ ಇದೆ. ಅವುಗಳೆಂದರೆ,
1. ಉತ್ತಮ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಪಡೆದು ಈಗಿನ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುವುದು.
2. ಕಂಪ್ಯೂಟರ ಮೂಲ ಪರಿಕಲ್ಪನೆಗಳನ್ನು ತಿಳಿದುಕೊಳ್ಳುವುದು.
3. ವಿಷಯಕ್ಕೆ ಸಂಬಂಧಿಸಿದ ಅನೇಕ ಸಹ ಸಂಬಂಧ ಪುಸ್ತಕಗಳನ್ನು ಓದುವುದರ ಮೂಲಕ ವಿಷಯದ ಹೆಚ್ಚಿನ ಜ್ಞಾನ ಸಂಪಾದನೆಯಾಗುವುದು.
4. ಮೊಬೈಲನಲ್ಲಿ ಯು-ಟೂಬ ಅಲ್ಲದೇ ಅನೇಕ ಆನಲೈನ್ ಚಾನಲ್‍ಗಳನ್ನು ವಿಕ್ಷಣೆ ಮಾಡಿ ವಿಷಯದ ಜ್ಞಾನ ಹೆಚ್ಚಿಸಿಕೊಳ್ಳುವುದು.
5. ದೂರದರ್ಶನದಲ್ಲಿ ಬರುವ ಆನಲೈನ್ ತರಗತಿಗಳನ್ನು ವಿಕ್ಷಿಸಿ ಅದರ ಮೂಲಕ ಹೊಸ ಹೊಸ ವಿಚಾರಗಳನ್ನು ತಿಳಿದುಕೊಂಡು ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವುದು.
6. ವಿಷಯಕ್ಕೆ ಸಂಬಂಧಿಸಿದ ಪಾಠಭೋದನೆಗೆ ಅನುಕೂವಾದಂತೆ ಅನೇಕ ಹೊಸ ಹೊಸ ಪಾಠೋಪಕರಣಗಳನ್ನು ತಯಾರಿಸುವುದು.
7. ಸಹೋದ್ಯೋಗಿ ಮಿತ್ರರ ಜೊತೆಗೆ ಪಾಠಬೋಧನೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿ ನಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವುದು.
8. ವಿದ್ಯಾರ್ಥಿಗಳ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಅವರ ಕಲಿಕೆಗೆ ಬೇಕಾದ ಮೂಲ ವಿಷಯಗಳನ್ನು ತಿಳಿಸುವುದು.
9. ಆನಲೈನ್ ತರಬೇತಿಯ ಮೂಲಕ ಶಿಕ್ಷಕರು ತಂತ್ರಜ್ಞಾನದಲ್ಲಿ ಹೆಚ್ಚಿನ ಜ್ಞಾನವನ್ನು ಹೊಂದುವ ಮೂಲಕ ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ಈ ಮೇಲಿನ ಎಲ್ಲಾ ಅಂಶಗಳನ್ನು ಶಿಕ್ಷಕರು ತಮ್ಮ ಬೋಧನಾ ವಿಧಾನದಲ್ಲಿ ಅಳವಡಿಸಿಕೊಂಡು ಇವತ್ತಿನ ಈ ಒಂದು ಪರಿಸ್ಥಿತಿಯಲ್ಲಿ ನಿರಂತರವಾಗಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಜ್ಞಾನಾರ್ಜನೆಯನ್ನು ಹೆಚ್ಚಿಸುವ ಮೂಲಕ ತಮ್ಮ ವೃತ್ತಿ ನೈಪುಣ್ಯತೆಯನ್ನು ಹೆಚ್ಚಿಸುವುದು.
ಶಿಕ್ಷಕರ ಸಹಿ ಮುಖ್ಯ ಗುರುಗಳ ಸಹಿ
No comments:
Post a Comment